ಸಾಗರ್ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 2012 ರ ಕನ್ನಡ ರೋಮ್ಯಾಂಟಿಕ್ ಕಥಾ ಚಿತ್ರ. ಎಂಡಿ ಶ್ರೀಧರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಗುರುಕಿರಣ್ ಚಿತ್ರದ ಸಂಗೀತ ನಿರ್ದೇಶಕರು. ರಾಮು ನಿರ್ಮಾಣದ ಈ ಚಿತ್ರಕ್ಕೆ ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ಚಲನಚಿತ್ರವನ್ನು ನಂತರ . ಎಂದು ಹಿಂದಿಗೆ ಡಬ್ ಮಾಡಲಾಯಿತು. == ಕಥಾವಸ್ತು == ಶ್ರೀಮಂತ ಕೈಗಾರಿಕೋದ್ಯಮಿ ರಾಜಶೇಖರ ಮೂರ್ತಿ ಕುಟುಂಬದಿಂದ ಬಂದಿರುವ ಸಾಗರ್ (ಪ್ರಜ್ವಲ್ ದೇವರಾಜ್) ನ ಮದುವೆ ಪ್ರಿಯಾಂಕಾ (ಹರಿಪ್ರಿಯಾ) ಜೊತೆ ನಿಶ್ಚಯವಾದಾಗ ತಾನು ಕಾಜಲ್ ಅನ್ನು ಪ್ರೀತಿಸುತ್ತಿದ್ದೇನೆ ಎಂದು ಸುಳ್ಳು ಹೇಳಬೇಕಾಗಿ ಬರುತ್ತದೆ. ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಉಳಿದ ಭಾಗವಾಗಿದೆ. == ಪಾತ್ರವರ್ಗ == ಸಾಗರ್ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಕಾಜಲ್ ಆಗಿ ರಾಧಿಕಾ ಪಂಡಿತ್ ಸಂಜನಾ ಗಲ್ರಾನಿ ಪ್ರಿಯಾಂಕಾ ಪಾತ್ರದಲ್ಲಿ ಹರಿಪ್ರಿಯಾ ಸೋನು ಪಾತ್ರದಲ್ಲಿ ದೇವ್ ಗಿಲ್ ವಿನಯ ಪ್ರಸಾದ್ ಅವಿನಾಶ್ ಶರತ್ ಲೋಹಿತಾಶ್ವ ಸಂಗೀತಾ ಗಣೇಶ್ ರಾವ್ ಕೇಸರ್ಕರ್ ಸುರೇಶ್ ಅಂಚನ್ ಆದಿ ಲೋಕೇಶ್ ಕಡ್ಡಿಪುಡಿ ಚಂದ್ರು == ಧ್ವನಿಮುದ್ರಿಕೆ == ಕವಿರಾಜ್ ಅವರ ಸಾಹಿತ್ಯಕ್ಕೆ ಗುರುಕಿರಣ್ ಅವರು ಹಾಡುಗಳನ್ನು ರಚಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಆಡಿಯೋ ವಿತರಿಸಲಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸಾಗರ್ @ ಐ ಎಮ್ ಡಿ ಬಿ